"ವೀರ ಹಕೀಕತರಾಯ್" ಎಂದರೆ
ಪಂಜಾಬಿಗಳಿಗೆ ಇಂದಿಗೂ ಅದಮ್ಯ ಅಭಿಮಾನ. ೧೭೧೯ರಲ್ಲಿ ಪಂಜಾಬಿನ ಸಿಯಾಲಕೋಟ್ ಎಂಬ ಹಳ್ಳಿಯಲ್ಲಿ
ಜನಿಸಿದ ಹಕೀಕತರಾಯ್,ಕೇವಲ ೫ನೇ ವಯಸ್ಸಿನಲ್ಲೇ ಇತಿಹಾಸ ಹಾಗೂ ಸಂಸ್ಕೃತದಲ್ಲಿ
ಮಹಾಮೇಧಾವಿಯಾಗಿದ್ದ. ೧೦ನೇ ವಯಸ್ಸಿನಲ್ಲಿ ಆತನಿಗೆ "ಫಾರಸಿ" ಭಾಷೆ ಕಲಿಯಬೇಕೆಂಬ ಆಸೆ
ಮೂಡಿತು. ಫಾರಸಿ ಭಾಷೆಯನ್ನು ಕಲಿಯಲು ಮದರಸಾ ಸೇರಿದ. ಮದರಸಾದಲ್ಲಿರುವ ವಿದ್ಯಾರ್ಥಿಗಳು ಇಸ್ಲಾಂ
ಅನುಯಾಯಿಗಳು. ಸದಾ ಹಿಂದೂ ದೇವ-ದೇವತೆಗಳನ್ನು ನಿಂದಿಸುವುದೇ ಅವರ ಕಾಯಕವಾಗಿತ್ತು. ಆದರೆ ಹಕೀಕತನ
ಮುಂದೆ ಅವರಾಟ ನಡೆಯುತ್ತಿರಲಿಲ್ಲ. ನಿಂದಿಸುವವರ ಎದುರು ನಿಂತು ವಾದವನ್ನು ಮಾಡಿ ಅವರೇ
ಸೋಲೊಪ್ಪಿಕೊಳ್ಳುವಂತೇ ಮಾಡುತ್ತಿದ್ದ. ಇದು ಮುಸ್ಲಿಂ ವಿದ್ಯಾರ್ಥಿಗಳಿಗೆ ಇರಿಸು-ಮುರಿಸನ್ನುಂಟು
ಮಾಡಿತ್ತು. ವಾದದಲ್ಲಿ ಹಕೀಕತನನ್ನು ಗೆಲ್ಲಲು ಸಾಧ್ಯವೇ ಇಲ್ಲವಾಗಿತ್ತು.
ಹಕೀಕತನನ್ನು ಬೌದ್ಧಿಕವಾಗಿ ಗೆಲ್ಲಲಾರದ
ವಿದ್ಯಾರ್ಥಿಗಳು ಆತನ ಮೇಲೆ ದೈಹಿಕ ಹಲ್ಲೆ ನಡೆಸಿದರು. ಅಲ್ಲದೇ ಆತ ಬೀಬಿ ಫಾತಿಮಾಳನ್ನು ಅಪಮಾನಿಸಿದನೆಂದು
ಮದರಸಾದ ಮೌಲ್ವಿಗೆ ದೂರನ್ನು ನೀಡಿದರು. ಆಕ್ರೋಶಗೊಂಡ ಮೌಲ್ವಿ ನಗರದ ಕಾಜಿಯ ಬಳಿ ದೂರನ್ನು
ಸಲ್ಲಿಸಿದ. ಮತಾಂಧ ಕಾಜಿ ಹಕೀಕತನನ್ನು ಆರೋಪಿಯನ್ನಾಗಿಸಿ,ಹಕೀಕತನಿಗೆ ಸಾವಿನ ಶಿಕ್ಷೆಯನ್ನು
ವಿಧಿಸಬೇಕು ಅಥವಾ ಆತ ಇಸ್ಲಾಂ ಧರ್ಮಕ್ಕೆ ಮತಾಂತರವಾಗಬೇಕೆಂದು ಅಧಿಸೂಚನೆ ಹೊರಡಿಸಿದ. ಹಕೀಕತನ
ಪೋಷಕರು ಇಸ್ಲಾಂಗೆ ಮತಾಂತರವಾಗೆಂದು ಪರಿಪರಿಯಾಗಿ ಬೇಡಿಕೊಂಡರು. ಆದರೆ ಹಕೀಕತ ಅವರ ಮಾತನ್ನು
ತಿರಸ್ಕರಿಸಿ "ಪ್ರಾಣವನ್ನಾದರೂ ಬಿಟ್ಟೇನು,ಆದರೆ ಧರ್ಮ ಬಿಡಲಾರೆ" ಎಂದು
ನಿಶ್ಚಯಿಸಿದ. ೧೭೩೪ರಲ್ಲಿ ಹಕೀಕತನಿಗೆ ಮರಣದಂಡನೆಯನ್ನು ನೀಡಲಾಯಿತು. ಮತಾಂಧತೆಯ ಕರಿನೆರಳಲ್ಲಿ
ಮುಗ್ಧಜೀವವೊಂದು ಕರಗಿಹೋಯಿತು.
No comments:
Post a Comment